ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆ ಅಕ್ಷರದವ್ವ : ಸ್ವಾಮೀಜಿ

546

ಹೊನ್ನಾಳಿ: ದೇಶದ ಪ್ರಥಮ ಶಿಕ್ಷಕಿ ಎಂಬ ಹಿರಿಮೆಯ ಸಾವಿತ್ರಿಬಾಯಿ ಫುಲೆ ಅನುಪಮ ಸಮಾಜ ಸುಧಾರಕಿ, ಅನನ್ಯ ಶಿಕ್ಷಕಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್‍ಯ ಅವರು ಬಣ್ಣಿಸಿದರು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕದಿಂದ ಇಲ್ಲಿನ ಗುರುಭವನದಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ ೧೯೦ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮೇಲ್ಜಾತಿಯ ಪುರುಷರು, ಉಳ್ಳವರು ಹಾಗೂ ಒಂದು ಭಾಷಾ ವರ್ಗದವರ ಸ್ವತ್ತಾಗಿದ್ದ ಶಿಕ್ಷಣವನ್ನು ಎಲ್ಲರಿಗೂ, ವಿಶೇಷವಾಗಿ ಮಹಿಳೆಯರಿಗೆ ನೀಡಲು ಇನ್ನಿಲ್ಲದಂತೆ ಶ್ರಮಿಸಿದ ಸಾವಿತ್ರಿಬಾಯಿ ಫುಲೆ ಪ್ರಾತಃಸ್ಮರಣೀಯರು. ಅವರಿಲ್ಲದಿ ದ್ದರೆ, ಮಹಿಳೆಯರು ಅಭಿವೃದ್ಧಿ ಹೊಂದುತ್ತಿರಲಿಲ್ಲ ಎಂದು ತಿಳಿಸಿದರು.
೧೮೩೧ರಲ್ಲಿ ಜನಿಸಿದ ಸಾವಿತ್ರಿ ಬಾಯಿ ಫುಲೆ, ೧೮೩೯ರಲ್ಲಿ ತಮ್ಮ ಎಂಟನೆಯ ವಯಸ್ಸಿನಲ್ಲಿ ೧೩ ವರ್ಷ ವಯಸ್ಸಿನ ಜ್ಯೋತಿಬಾಫುಲೆ ಅವರೊಂದಿಗೆ ಬಾಲ್ಯವಿವಾಹ ಆಗುತ್ತಾರೆ. ಶ್ರೇಣೀಕೃತ ಸಮಾಜ ವ್ಯವಸ್ಥೆ ಯಲ್ಲಿ ಶಿಕ್ಷಣ ಸೇರಿದಂತೆ ಯಾವುದೇ ಮೂಲಭೂತ ಹಕ್ಕುಗಳ ಅರಿವಿಲ್ಲದೇ ಬೆಳೆದ ಸಾವಿತ್ರಿಬಾಯಿ ಫುಲೆ ಅಂದಿನ ಸಮಾಜದಲ್ಲಿನ ಮಹಿಳೆಯರ ದುಸ್ಥಿತಿ ಬಗ್ಗೆ ಮರುಕಪಡುತ್ತಾರೆ. ಮಹಿಳೆ ಯರಿಗೆ ಶಿಕ್ಷಣ ನೀಡಬೇಕು ಎಂದು ಪತಿ ಜ್ಯೋತಿಬಾ ಫುಲೆ ನಿರ್ಧರಿಸುತ್ತಾರೆ. ಪುರುಷರು ಶಿಕ್ಷಣ ನೀಡಲು ಮುಂದಾ ದರೆ ಮಹಿಳೆಯರು ಶಾಲೆಗೆ ಬರುವು ದಿಲ್ಲ ಎಂಬ ಕಾರಣಕ್ಕಾಗಿ ಸಾವಿತ್ರಿ ಬಾಯಿ ಫುಲೆ ಅವರಿಗೆ ಜ್ಯೋತಿಬಾ ಫುಲೆ ಅಕ್ಷರಾಭ್ಯಾಸ ಮಾಡಿಸುತ್ತಾರೆ. ತಾವು ವಿದ್ಯೆ ಕಲಿತ ಬಳಿಕ ತಾವೇ ಶಿಕ್ಷಕಿ ಯಾಗಿ ಹತ್ತಾರು ಅಡೆತಡೆಗಳ ಮಧ್ಯೆಯೂ ೧೮೪೮ರಲ್ಲಿ ಕನ್ಯಾ ಶಾಲೆ ಎಂಬ ಹೆಸರಿನಲ್ಲಿ ಮಹಿಳೆಯರಿಗಾಗಿ ಶಾಲೆ ಪ್ರಾರಂಭಿಸುತ್ತಾರೆ. ಶಿಕ್ಷಣಾಧಿಕಾರಿ ಭಿಡೆ ಅವರ ಮನೆಯಲ್ಲಿಯೇ ಮೊತ್ತಮೊದಲು ಅವರು ಶಾಲೆ ಪ್ರಾರಂಭಿಸುತ್ತಾರೆ. ಸಮಾಜದ ಮೇಲ್ಜಾತಿಯವರ ವಿರೋಧದ ಮಧ್ಯೆಯೂ ಅವರು ಮಹಿಳೆಯರಿಗೆ ಶಿಕ್ಷಣ ನೀಡುತ್ತಾರೆ. ಶಾಲೆಗೆ ತೆರಳುವ ಮಾರ್ಗದಲ್ಲಿ ಜನರು ಸಾವಿತ್ರಿಬಾಯಿ ಫುಲೆ ಅವರನ್ನು ಮನಬಂದಂತೆ ನಿಂದಿಸುತ್ತಾರೆ, ಥಳಿಸುತ್ತಾರೆ. ಅವರ ಮೈಮೇಲೆ ಸೆಗಣಿ ಎರಚುತ್ತಾರೆ. ತಮ್ಮೊಂದಿಗೆ ಇನ್ನೊಂದು ಸೀರೆ ತೆಗೆದು ಕೊಂಡು ಹೋಗುತ್ತಿದ್ದ ಸಾವಿತ್ರಿಬಾಯಿ ಫುಲೆ ತರಗತಿಗೆ ಹೋದ ಬಳಿಕ ಬಟ್ಟೆ ಬದಲಿಸಿಕೊಂಡು ಪಾಠ ಮಾಡುತ್ತಾರೆ. ಹೀಗೆ, ತಮಗಾದ ಅವಮಾನಗಳನ್ನು ಸಹಿಸಿಕೊಂಡು ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ ಸಾವಿತ್ರಿ ಬಾಯಿ ಫುಲೆ ಅವರ ದಿಟ್ಟತನವನ್ನು ಇಂದಿನ ಮಹಿಳೆಯರು ಮೈಗೂಡಿಸಿ ಕೊಳ್ಳಬೇಕಿದೆ ಎಂದು ವಿವರಿಸಿದರು.
ಹೊನ್ನಾಳಿ ಹಿರೇಕಲ್ಮಠದ ಪೂಜ್ಯರಾದ ಒಡೆಯರ್ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಅಕ್ಷರದ ಗಂಧ- ಗಾಳಿಯೇ ಇಲ್ಲದ ಸಂದರ್ಭದಲ್ಲಿ ಮಹಿಳೆಯರಿಗೆ ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆ ಅಕ್ಷರದವ್ವ ಎಂದು ಹೆಸರಾಗಿzರೆ. ಭಾರತದಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದ ಅವರು ೧೮ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ಸ್ಮರಣೀಯವಾದುದು ಎಂದರು.
ಸಾವಿತ್ರಿಬಾಯಿ ಫುಲೆ ಅವರ ಅಕ್ಷರ ಕ್ರಾಂತಿ ಗಮನಿಸಿದ ಅಂದಿನ ಬ್ರಿಟೀಷ್ ಸರಕಾರ ಅವರಿಗೆ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಎಂಬ ಬಿರುದು ನೀಡಿ ಗೌರವಿಸಿತ್ತು. ಅವರ ಕಾರಣಕ್ಕಾಗಿಯೇ ಇಂದು ಮಹಿಳೆಯರು ಶಿಕ್ಷಣ, ರಾಜಕೀಯ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಇಂಥ ಧೀಮಂತ ಮಹಿಳೆಯ ಜನ್ಮ ದಿನವನ್ನು ಆಚರಿಸುತ್ತಿ ರುವುದು ಮಾದರಿಯಾದುದು ಎಂದು ತಿಳಿಸಿದರು.
ವಿವಿಧ ಮಹನೀಯರುಗಳ ಜಯಂತ್ಯುತ್ಸವ ಆಚರಿಸುವುದು ಒಳ್ಳೆಯದೇ. ಆದರೆ, ಸರಕಾರಿ ರಜೆ ನೀಡುವ ಪರಿಪಾಠ ಕೈಬಿಟ್ಟರೆ ಒಳಿತು ಎಂದು ಸ್ವಾಮೀಜಿ ಇಂದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಎಸ್. ಷಹಜಾನ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಬಾಲ್ಯವಿವಾಹದ ಸಂಕೋಲೆಯಲ್ಲಿ ತಾವೇ ಸ್ವತಃ ಬಂಧಿಯಾಗಿದ್ದರೂ ಲೆಕ್ಕಸಿದೇ ನಾಳಿನ ಭವಿಷ್ಯದ ಬಗ್ಗೆ, ನಾಡಿನ ಜನತೆಯ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಶ್ರಮಿಸಿದರು. ಶಿಕ್ಷಕ ಸಮೂಹಕ್ಕೆ ಅವರು ಆದರ್ಶ, ಪ್ರೇರಣಾ ಶಕ್ತಿ, ಆಶಾಕಿರಣ ಎಂದು ಹೇಳಿದರು.
ಬಿಇಓ ಜಿ.ಇ. ರಾಜೀವ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ, ಬಿಆರ್‌ಪಿಗಳಾದ ನಾಗರತ್ನಮ್ಮ, ಜಿ.ಕೆ. ಅರುಣ್ ಕುಮಾರ್, ಶಿಕ್ಷಕಿ ಲತಾ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷೆಯರಾದ ಪುಷ್ಪಲತಾ ಕೆ. ತೇಜಮೂರ್ತಿ, ಎಚ್. ಲಲಿತಮ್ಮ, ಪ್ರಧಾನ ಕಾರ್ಯದರ್ಶಿ ರಂಜಿತಾ ಮತ್ತಿತರರು ಮಾತನಾಡಿದರು.
ಪಿಎಸ್‌ಐ ಬಸನಗೌಡ ಬಿರಾದಾರ, ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಟಿ.ಎಸ್. ರುದ್ರೇಶ್, ಉಪಾಧ್ಯಕ್ಷ ಪುರುಷೋತ್ತಮ್, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷೆ ಗೀತಾ ದೊಡ್ಡಪ್ಪ, ಸಂಘಟನಾ ಕಾರ್ಯದರ್ಶಿಗಳಾದ ನಳಿನಾ, ಗಿರಿಜಮ್ಮ, ಕಾರ್ಯಕಾರಿಣಿ ಸದಸ್ಯೆ ಉಷಾ ಮತ್ತಿತರರು ಉಪಸ್ಥಿತರಿದ್ದರು.
ಜಿ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಜೆ.ಎಚ್. ಸುರೇಶ್ ಗೆಜ್ಜುರಿ ಮತ್ತು ಎಸ್. ಷಹಜಾನ್ ಅವರನ್ನು, ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರು ಹಾಗೂ ಇತರರನ್ನು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಆತ್ಮೀಯವಾಗಿ ಸನ್ಮಾನಿಸಿದರು.