ಅಕ್ರಮ ಸಂಬಂಧ: ತಂದೆಯನ್ನೇ ಕೊಂದ ತಾಯಿ-ಮಗಳು

365

(ಹೊಸ ನಾವಿಕ ನ್ಯೂಸ್)
ಹೊನ್ನಾಳಿ: ಪ್ರಿಯಕರನೊಂದಿಗೆ ಸೇರಿಕೊಂಡು ತಮ್ಮ ತಂದೆಯನ್ನೇ ಕೊಲೆಗೈದ ಅಮ್ಮ-ಮಗಳು ಹಾಗೂ ಪ್ರಿಯಕರನನ್ನು ಹೊನ್ನಾಳಿ ಪೊಲೀಸರು ಬಂಧಿಸಿzರೆ.
ತಾಲೂಕಿನ ಕುಳಗಟ್ಟೆ ಗ್ರಾಮದ ವೈ.ಟಿ. ಶ್ರೀನಿವಾಸ್, ಕೆ.ಎಸ್. ಸಿಂಧು ಹಾಗೂ ಸಿ. ಉಷಾ ಬಂಧಿತ ಕೊಲೆ ಆರೋಪಿಗಳು. ಕುಳಗಟ್ಟೆ ಗ್ರಾಮದ ಮಂಜಪ್ಪ(೭೦) ಕೊಲೆಗೀಡಾದ ವೃದ್ಧ.
ಕೊಲೆಗೀಡಾದ ಮಂಜಪ್ಪ ಅವರ ಪುತ್ರಿ ಉಷಾ ಕುಳಗಟ್ಟೆ ಗ್ರಾಮದ ವೈ.ಟಿ. ಶ್ರೀನಿವಾಸ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದೇ ಸಲುಗೆಯ ಮೇಲೆ ಉಷಾ ಪುತ್ರಿ, ಶಿವಮೊಗ್ಗದ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಕೆ.ಎಸ್. ಸಿಂಧು ಜತೆಗೂ ವೈ.ಟಿ. ಶ್ರೀನಿವಾಸ್ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ಮಂಜಪ್ಪ ಅವರಿಗೆ ಗೊತ್ತಾಗಿದೆ. ಇದನ್ನು ಖಂಡಿಸಿದ ಮಂಜಪ್ಪ ಮರ್ಯಾದೆಯಿಂದ ಬಾಳ್ವೆ ನಡೆಸುವಂತೆ ಕೆ.ಎಸ್. ಸಿಂಧು ಹಾಗೂ ಉಷಾ ಇಬ್ಬರಿಗೂ ಹೇಳಿzರೆ.
ಕೆ.ಎಸ್. ಸಿಂಧು ಹಾಗೂ ಉಷಾ ಈ ಮಾತುಗಳಿಂದ ಕ್ರುದ್ಧರಾಗಿ ಮಂಜಪ್ಪ ಅವರನ್ನು ಕೊಲೆ ಮಾಡಲು ನಿರ್ಧರಿಸಿzರೆ. ಪೂರ್ವನಿಯೋಜಿತ ಸಂಚಿನ ಮೇರೆಗೆ ಮಾ.೧ರಂದು ಮಂಜಪ್ಪನಿಗೆ ಮದ್ಯಪಾನ ಮಾಡಿಸಿದ ವೈ.ಟಿ. ಶ್ರೀನಿವಾಸ್ ಅಡಕೆ ತೋಟಕ್ಕೆ ನೀರು ಹರಿಸಲು ಕರೆದೊಯ್ದು ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿzನೆ. ಬಳಿಕ, ಸಮೀಪದ ನಾಲೆಗೆ ಶವ ಎಸೆದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿzನೆ. ನಾಲೆಯಲ್ಲಿ ತೇಲಿ ಹೋದ ಶವ ಕಮ್ಮಾರಗಟ್ಟೆ ಗ್ರಾಮದ ಬಳಿ ದೊರೆತಿತ್ತು. ಇದೀಗ, ವೈ.ಟಿ. ಶ್ರೀನಿವಾಸ್, ಕೆ.ಎಸ್. ಸಿಂಧು ಹಾಗೂ ಸಿ. ಉಷಾ ತಾವೇ ಮಂಜಪ್ಪ ಅವರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಸಿಪಿಐ ಟಿ.ವಿ. ದೇವರಾಜ್ ಮೂವರನ್ನೂ ಬಂಧಿಸಿ ಮುಂದಿನ ಕ್ರಮ ಜರುಗಿಸಿzರೆ.