ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣಾ ವರದಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಸೋಂಕು ಇಲ್ಲ : ಡಿಸಿ

588

ದಾವಣಗೆರೆ :  ಇಲ್ಲಿಯವರೆಗೆ ಭಾರತವೂ ಸೇರಿದಂತೆ ೧೧೭ ದೇಶ/ಪ್ರದೇಶಗಳನ್ನು ಬಾಧಿಸಿರುವ ಇತ್ತೀಚಿನ ನೋವೆಲ್ ಕೊರೊನಾ ವೈರಸ್ (covid-19)ನ್ನು ೨೦೨೦ ರ ಜನವರಿ ೩೦ ರಂದು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ(PHEIC) ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ.

    ವಿಶ್ವ ಆರೋಗ್ಯ ಸಂಸ್ಥೆಯು ೨೦೨೦ ರ ಮಾರ್ಚ್ ೧೧ ರಂದು ಕೋವಿಡ್-೧೯ ನ್ನು ಸರ್ವವ್ಯಾಪಿ ರೋಗ ಎಂದು ನಿರೂಪಿಸಿದೆ.  ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯವು ರೋಗ ತಡೆಗಟ್ಟುವ ಕ್ರಮಗಳನ್ನು ಎಲ್ಲ ರೀತಿಯ ಸರ್ವೇಕ್ಷಣೆಯನ್ನು ಮತ್ತು ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು ಬಲಪಡಿಸಿದೆ.

ಜಿಲ್ಲೆಯಿಂದ ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣಾ ವರದಿ : ಮಾರ್ಚ್ ೦೪ ರಿಂದ ಇಲ್ಲಿಯವರೆಗೆ

ಸಂಗ್ರಹ ವರದಿ  ೨೫.೦೩.೨೦೨೦

ಕ್ರ.ಸಂ        ಚಟುವಟಿಕೆ ಈ ದಿನ ಸಂಚಿತ

೧            ಅವಲೋಕನೆಗಾಗಿ ಪಟ್ಟಿ ಮಾಡಲ್ಪಟ್ಟವರು         ೩೫         ೩೨೪    

೨            ೨೮ ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದವರು            ೦೦         ೦೧       

೩            ೧೪ ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದವರು            ೩೦         ೮೧       

೪            ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟವರು       ೦೩         ೨೪೪    

೫            ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲ್ಪಟ್ಟವರು    ೦೬         ೨೨        

೬            ನಮ್ಮ ಜಿಲ್ಲೆಯಿಂದ ಹೊರ ದೇಶಗಳಿಗೆ ಹೋದವರು (ಅಲ್ಲಿಯೇ ನೆಲೆಸಿರುವವರು) ೦೦         ೦೯        

೭            ನಮ್ಮ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಹೋದವರು (ಬೇರೆ ದೇಶಕ್ಕೆ ಹೋಗಿ ಬಂದವರು)     ೦೨         ೧೫       

೮            ಪರೀಕ್ಷೆ ಮಾಡಲು ಸಂಗ್ರಹಿಸಲಾದ ಒಟ್ಟು ಮಾದರಿಗಳು ೦೫        ೨೭        

೯            ನೆಗೆಟಿವ್ ಎಂದು ವರದಿಯಾದ ಒಟ್ಟು ಫಲಿತಾಂಗಳು       ೦೦         ೨೧        

೧೦         ಖಚಿತಪಟ್ಟ ಫಲಿತಾಂಶಗಳು       ೦೦         ೦೦        

     ಇದುವರೆಗೆ ಜಿಲ್ಲೆಯಲ್ಲಿ ಈ ದಿನದವರೆಗೆ ಯಾವುದೇ ಕೊರೊನಾ ವೈರಸ್ ಸೋಂಕು ಪ್ರಕರಣ ವರದಿಯಾಗಿಲ್ಲ. ೨೦೨೦ ರ ಮಾರ್ಚ್ ೦೪ ರಿಂದ ಇದುವರೆಗೆ ೩೨೪ ಜನರು ಜಿಲ್ಲೆಯಿಂದ ವಿದೇಶ ಪ್ರಯಾಣ ಮಾಡಿ ಬಂದಿದ್ದು, ಒಬ್ಬರು ೨೮ ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಹಾಗೂ ೮೧ ಜನರು ೧೪ ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು ೨೪೪ ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದು, ೨೨ ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

      ಹೊರದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ವಿದೇಶಿಗರು ಜಿಲ್ಲೆಗೆ ಬಂದು ಮತ್ತೆ ಹೊರದೇಶಗಳಿಗೆ ಇದುವರೆಗೆ ೦೯ ಜನರು ತೆರಳಿದ್ದಾರೆ. ವಿದೇಶಗಳಿಗೆ ಭೇಟಿ ನೀಡಿ ನಮ್ಮ ಜಿಲ್ಲೆಗೆ ಬಂದು ಇತರೆ ಜಿಲ್ಲೆಗಳಿಗೆ ಇದುವರೆಗೆ ೧೫ ಜನ ತೆರಳಿರುತ್ತಾರೆ. ಕೊರೋನಾ ವೈರಸ್ ಪರೀಕ್ಷೆಗಾಗಿ ೨೭ ಮಾದರಿಗಳನ್ನು ಇದುವರೆಗೆ ಕಳುಹಿಸಲಾಗಿದ್ದು, ೨೧ ಮಾದರಿಗಳು ನೆಗೆಟಿವ್ ಎಂದು ಫಲಿತಾಂಶ ಬಂದಿರುತ್ತದೆ. ಇದುವರೆಗೆ ಯಾವುದೇ ಖಚಿತಪಟ್ಟ ಪ್ರಕರಣಗಳು ಇರುವುದಿಲ್ಲ.

ಸಾರ್ವಜನಿಕರಿಗೆ ಮನವಿ: ಕೊವಿಡ್-೧೯ ಪೀಡಿತ ಪ್ರದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ ದಿನದಿಂದ ೧೪ ದಿನಗಳವರೆಗೆ, ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು. ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು. ಅಥವಾ ೧೦೪ ಸಹಾಯವಾಣಿಗೆ ಕರೆ ಮಾಡುವುದು. ವೈಯುಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ, ಕೈ ಸಚ್ಚಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು.

    ಎಲ್ಲಾ ರೀತಿಯ ಮಾರ್ಗಸೂಚಿಗಳು ಮತ್ತು ಸಲಹೆಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ   ಸೇವೆಗಳ ಜಾಲತಾಣದಲ್ಲಿ ಲಭ್ಯವಿದ್ದು, ಜಾಲತಾಣದ ವಿಳಾಸ https://karunadu.karnataka.gov.in/hfw/kannada/pages/nCov-iec.aspxಇಲ್ಲಿ ಪಡೆಯ ಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.